ಪ್ರವೇಶ

ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೋಮಾ - ಎ.ಐ.ಸಿ.ಟಿ.ಇ. ನಿಂದ ಅನುಮೋದಿಸಲಾಗಿದೆ ಮತ್ತು ಡೈರೆಕ್ಟರೇಟ್ ಆಫ್ ಟೆಕ್ನಿಕಲ್ ಎಜುಕೇಷನ್ (ಡಿ.ಟಿ.ಇ.) ಗೆ ಅಫಿಲಿಯೇಟ್ ಆಗಿದೆ.


ಪ್ರವೇಶದ ಕಾರ್ಯವಿಧಾನ:

ಈ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಇಚ್ಚಿಸುವ ವಿದ್ಯಾರ್ಥಿಗಳು ಅಪ್ಲಿಕೇಷನ್ ಫಾರಂ (ಅರ್ಜಿ) ಯನ್ನು ಕರ್ನಾಟಕ ರಾಜ್ಯದ ಯಾವುದೇ ಸರ್ಕಾರೀ / ಎಡೆಡ್ ಪಾಲಿಟೆಕ್ನಿಕ್ ನಿಂದ ಪಡೆಯಬಹುದು, ಮತ್ತು ಭರ್ತಿ ಮಾಡಿದ ಅರ್ಜಿಯನ್ನು ನಮ್ಮ ನೋಡಲ್ ಸೆಂಟರ್ ಅಂದರೆ ಎಸ್.ಜೆ.(ಸರ್ಕಾರೀ) ಪಾಲಿಟೆಕ್ನಿಕ್ ಅಥವಾ ಎಮ್.ಇ.ಐ.ಪಿ. ಬೆಂಗಳೂರಿನಲ್ಲಿ ಪ್ರಸ್ತುತ ಪಡಿಸಬಹುದು. ಅಭ್ಯರ್ಥಿಯು ಅರ್ಜಿಯನ್ನು ಎಲ್ಲಾ ವಿವರಗಳೊಡನೆ ಭರ್ತಿ ಮಾಡಬೇಕು. ವಿವಿಧ ವರ್ಗಗಳಿಗೆ ಅಂದರೆ, ಎಸ್.ಸಿ. / ಎಸ್.ಟಿ., ವರ್ಗ 1, 2ಎ, 2ಬಿ, 3ಎ, 3ಬಿ, ಹಾಗೂ ಗ್ರಾಮೀಣ ಬಾಲಕಿಯರಿಗೆ ಸರ್ಕಾರೀ ನೀತಿ ನಿಯಮಗಳ ಪ್ರಕಾರ ಸೀಟುಗಳನ್ನು ಕಾದಿರಿಸಲಾಗುತ್ತದೆ.
ಪ್ರವೇಶಕ್ಕೆ ಅರ್ಹತೆ:

ಸಾಮಾನ್ಯ ವರ್ಗ:
ಎಸ್.ಎಸ್.ಎಲ್.ಸಿ. ಪಾಸ್  ಮ್ಯಾಥೆಮ್ಯಾಟಿಕ್ಸ್ ಮತ್ತು ಸೈನ್ಸ್ ನಲ್ಲಿ 35 % ಅಗ್ರಿಗೇಟ್ ಅಂಕಗಳನ್ನು ಪಡೆದಿರುವ ಎಸ್.ಸಿ. / ಎಸ್.ಟಿ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ
ಎಸ್.ಎಸ್.ಎಲ್.ಸಿ. ಯಲ್ಲಿ ಪಾಸ್ ಆಗಿರುವ ಎಸ್.ಸಿ./ ಎಸ್.ಟಿ. ವಿದ್ಯಾರ್ಥಿಗಳಿಗೆ 25 % ಸೀಟುಗಳನ್ನು ಕಾದಿರಿಸಲಾಗುತ್ತದೆ.
ಆಟೊಮೊಬೈಲ್ ಇಂಜಿನಿಯರಿಂಗ್ ಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಜುಲೈ 1 ನೇ ತಾರೀಖಿನ ವೇಳೆಗೆ ಕಡೇ ಪಕ್ಷ 16 ವರ್ಷ ವಯಸ್ಸು ತುಂಬಿದವರಾಗಿರಬೇಕು.
 

ಇತರೇ ರಾಜ್ಯಗಳಿಂದ ಪ್ರವೇಶ ಇಚ್ಚಿಸುತ್ತಿರುವ ಅಭ್ಯರ್ಥಿಗಳಿಗಾಗಿ:
ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಯಲ್ಲದೆ ಇತರೇ ಪರೀಕ್ಷೆಗಲನ್ನು ಪಾಸ್ ಮಾಡಿರುವ ಅಭ್ಯರ್ಥಿಗಳು ಸೆಕ್ರೆಟರಿ, ಬೋರ್ಡ್ ಆಫ್ ಟೆಕ್ನಿಕಲ್ ಎಕ್ಸಾಮಿನೇಷನ್, ಪ್ಯಾಲೇಸ್ ರೋಡ್, ಬೆಂಗಳೂರು ಇವರಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆಯಬೇಕು - ಕೋರ್ಸ್ ಗೆ ಪ್ರವೇಶ ಪಡೆಯುವ ಮುಂಚೆ.
ಇಚ್ಚಿಸುವುದಾದ್ರೆ ಈ ಪ್ರಮಾಣಪತ್ರವನ್ನು ಪಡೆಯುವುದರಲ್ಲಿ, ಅಭ್ಯರ್ಥಿಗಳಿಗೆ ಪಾಲಿಟೆಕ್ನಿಕ್ ಸಹಾಯ ಮಾಡಬಹುದು.
 

ಪ್ರವೇಶ ಇಚ್ಚಿಸುತ್ತಿರುವ ಅಭ್ಯರ್ಥಿಗಳಿಗೆ ಇರಬೇಕಾದ ಅವಶ್ಯಕತೆಗಳು:

ವರ್ಗಾವಣೆ ಸರ್ಟಿಫಿಕೇಟ್ ಹಾಗೂ ಕಾಂಡಕ್ಟ್ ಸರ್ಟಿಫಿಕೇಟ್ (ಒರಿಜಿನಲ್ ಮತ್ತು ಒಂದು ಕಾಪಿ)
ವರ್ಗಾವಣೆ ಸರ್ಟಿಫಿಕೇಟ್ ಹಾಗೂ ಕಾಂಡಕ್ಟ್ ಸರ್ಟಿಫಿಕೇಟ್ (ಒರಿಜಿನಲ್ ಮತ್ತು ಒಂದು ಕಾಪಿ)
6 ಭಾವಚಿತ್ರಗಳು (3 ಪಾಸ್ಪೋರ್ಟ್ ಸ್ಶೆeóï ಮತ್ತು 3 ಸ್ಟಾಂಪ್ ಸ್ಶೆeóï)
5 / 10 ವರ್ಷಗಳ ಸ್ಟಡಿ ಸೆರ್ಟಿಫಿಕೇಟ್ (1ನೇ ಕ್ಲಾಸಿನಿಂದ 10 ನೇ ಕ್ಲಾಸಿನ ವರೆಗೆ (1 ಒರಿಜಿನಲ್ ಮತ್ತು 1 ಕಾಪಿ)
ಎ.ಇ.ಓ. ಅಥವಾ ಬಿ.ಇ.ಓ.ರವರಿಂದ ಕೌಂಟರ್ ಸೈನ್ ಆದ ರೂರಲ್ ಸರ್ಟಿಫಿಕೇಟ್ (ಒರಿಜಿನಲ್ ಮತ್ತು ಒಂದು ಕಾಪಿ)
ಎಸ್.ಸಿ. / ಎಸ್.ಟಿ. ಮತ್ತು ವರ್ಗ 1 ರ ಅಭ್ಯರ್ಥಿಗಳಿಗಾಗಿ ತಹಶೀಲ್ದಾರ್ ರವರಿಂದ ಕೊಡಲ್ಪಟ್ಟ ಕ್ಯಾಸ್ಟ್ ಸರ್ಟಿಫಿಕೇಟ್ (ಒರಿಜಿನಲ್ ಮತ್ತು ಒಂದು ಕಾಪಿ.)
ಕರ್ನಾಟಕ ರಾಜ್ಯದ ಪರೀಕ್ಷೆಗಳ ಹೊರತು ಇತರೇ 10 ನೇ ತರಗತಿ ಅಥವಾ ಸಮಾನ ಪರೀಕ್ಷೆಯನ್ನು ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಎಲಿಜಿಬಿಲಿಟಿ ಸರ್ಟಿಫಿಕೇಟ್ (ಒರಿಜಿನಲ್ ಮತ್ತು ಒಂದು ಕಾಪಿ)
ಇನ್ನೂ ಹೆಚ್ಚಿನ ವಿವರಗಳು ಬೇಕಾದರೆ, ಅಭ್ಯರ್ಥಿಗಳು ನಮ್ಮ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು.ಕೋರ್ಸ್ ನ ಹೆಸರು ಒಟ್ಟು ಸೀಟುಗಳು
ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟೇಷನ್ ಅಂಡ್ ಕಂಟ್ರೋಲ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ 60 ಸೀಟುಗಳು

ಸಂಜೆ ಪಾಲಿಟೆಕ್ನಿಕ್

ಕೋರ್ಸ್ ನ ಹೆಸರು ಒಟ್ಟು ಸೀಟುಗಳು
ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 60 ಸೀಟುಗಳು
ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ 60 ಸೀಟುಗಳು