ಎನ್.ಸಿ.ಸಿ

ಎನ್.ಸಿ.ಸಿ. ಚಟುವಟಿಕೆಗಳ ವರದಿ 2017-18


ಎನ್.ಸಿ.ಸಿ. ಯು ಮಾರು ರೀತಿಯ ಸೇವೆಗಳನ್ನು ಒದಗಿಸುವ ಒಂದು ಸಂಸ್ಥೆ - ಇದು ಆರ್ಮಿ, ನೇವಿ ಮತ್ತು ಏರ್-ಫೆÇೀರ್ಸ್ ಗಾಗಿ ಯುವಕರನ್ನು ರೂಪುಗೊಳಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ನಾಳೆಯ ನಾಗರೀಕರಾದ ಯುವಕರನ್ನು ವ್ಯವಸ್ಥಿತವಾದ ಶಿಸ್ತಿನ ಹಾಗೂ ಜವಾಬ್ದಾರಿಯುತ ನಾಗರೀಕರನ್ನಾಗಿ ¯ರೂಪುಗೊಳಿಸುವ ಜವಾಬಾýರಿಯನ್ನು ಹೊತ್ತಿರುವ ಸಂಸ್ಥೆ. ಎಮ್.ಇ.ಐ. ನ ಎನ್.ಸಿ.ಸಿ ಯು ಕರ್ನಾಟಕ ಸಿಗ್ನಲ್ ರೆಜಿಮೆಂಟ್ 1 ರೊಡನೆ ಹೊಂದಾಣಿಕೆ ಹೊಂದಿರುತ್ತದೆ, ಮತ್ತು ಇದರಲ್ಲಿ ಒಟ್ಟು 80 ಕೆಡೆಟ್ಟುಗಳು ಇದ್ದಾರೆ. ಹಾಗೂ ಇದರಲ್ಲಿ 20 ವಿದ್ಯಾರ್ಥಿನಿಯರು ಇದ್ದಾರೆ. ಎನ್.ಸಿ.ಸಿಯ ಎಲ್ಲಾ ಚಟುವಟಿಕೆಗಳೂ ಸಂಸ್ಥೆಯ ಶೈಕ್ಷಣಿಕ ವರ್ಷದ ಆರಂಭದೊಡನೆಯೇ ಅದರ ಜತೆಗೇ ಜೂನ್ ತಿಂಗಳಿನಲ್ಲಿಯೇ ಆರಂಭವಾಗುತ್ತವೆ.  ಶನಿವಾರಗಳಲ್ಲಿಯೂ, ರಜಾ ದಿನಗಳಲ್ಲಿಯೂ ಎನ್.ಸಿ.ಸಿ ಗೆ ಸೇರಿದೆ ಕೆಡೆಟ್ ಗಳಿಗೆ, ಒಟ್ಟು 20 ಪರೇಡ್ ಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಬಾರದಂತೆ ನಡೆಸಲಾಗುತ್ತದೆ. ಪರೇಡ್ ಗಳ ಸಮಯದಲ್ಲಿ ಡ್ರಿಲ್ಲ್, ಆಯುಧಗಳ ತರಬೇತಿ, ಮ್ಯಾಪ್ ಗಳನ್ನು ಓದುವಿಕೆ, ಮಿಲಿಟರಿ ವಿಷಯಗಳ ಬಗ್ಗೆ ಥಿಯರಿ ಕ್ಲಾಸ್ ಗಳನ್ನು ನಡೆಸಲಾಗುತ್ತದೆ.
2017-18 ನೆಯ ವರ್ಷದಲ್ಲಿ, ಸಾಮಾನ್ಯ ಗ್ರೇಡ್ ಗಳಲ್ಲದೆ, ಕೆಡೆಟ್ ಗಳಿಗೆ ಈ ಕೆಳಕಂಡ ಚಟುವಟಿಕೆಗಳನ್ನು ನಡೆಸಲಾಯಿತು:


  1. ಪ್ರಸ್ತುತ ವರ್ಷದಲ್ಲಿ ಒಬ್ಬ ಎಸ್.ಡಿ. ಕೆಡೆಟ್ ದೆಹಲಿಯಲ್ಲಿ ನಡೆದ ಮುಖ್ಯ ಮಂತ್ರಿಯವರ ರಾಲಿಯಲ್ಲಿ ಭಾಗವಹಿಸಿದನು.
  2. ಮೂವರು ಕೆಡೆಟ್ ಗಳು ಕೋಹಿಮಾ, ನಾಗಾಲ್ಯಾಂಡ್ ನಲ್ಲಿ ನಡೆದ ವಿಶೇಷ ನ್ಯಾಷ್ನಲ್ ಇಂಟೆಗ್ರೇಷನ್ ಕ್ಯಾಂಪ್ ನಲ್ಲಿ 14 ದಿವಸ ಭಾಗವಹಿಸಿ, ಕ್ರೀಡೆಗಳಲ್ಲಿ ಮೊದಲನೆಯ ಸ್ಥಾನ ಪಡೆದು, 17 ಡೈರೆಕ್ಟರಿಗಳಲ್ಲಿ ಒಟ್ಟಾರೆ ಚಾಂಪಿಯನ್ ಶಿಪ್ ಅನ್ನು ಗೆದ್ದು ಬಂದರು.
  3. ಇಬ್ಬರು ಕೆಡೆಟ್ ಗಳು ದೆಹಲಿಯಲ್ಲಿ ನಡೆದ ನ್ಯಾಷನಲ್ ಇಂಟೆಗ್ರೇಷನ್ ಕ್ಯಾಂಪ್ ನಲ್ಲಿ 14 ದಿವಸ ಭಾಗವಹಿಸಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ 17 ಡೈರೆಕ್ಟರಿಗಳಲ್ಲಿ ಎರಡನೆಯ ಸ್ಥಾನವನ್ನು ಗೆದ್ದು ಬಂದರು.
  4. 7 ಎಸ್.ಡಿ.ಗಳು ಗೋವಾದಲ್ಲಿ ನಡೆದ ಆರ್ಮಿ ಅಟ್ಯಾಚ್ ಮೆಂಟ್ ಕ್ಯಾಂಪ್ ನಲ್ಲಿ ಭಾಗವಹಿಸಿದರು. ಇದರಲ್ಲಿ ಕೆಡೆಟ್ ಗಳು ಸೈನ್ಯದ ಸೈನಿಕರೊಡನೆ ಎಲ್ಲ ರೀತಿಯ ತರಬೇತಿಯನ್ನು 12 ದಿನಗಳ ವರೆಗೆ ಪಡೆದರು.
  5. ಒಬ್ಬ ಎಸ್.ಡಿ. ಕೆಡೆಟ್ ನು ಮೈಸೂರಿನಲ್ಲಿ 10 ದಿನಗಳ ವರೆಗೆ ನಡೆದ ಆರ್.ಓ.ಸಿ. - 2018 ನ ಇಚಿಟರ್ ಗ್ರೂಪ್ ಕಾಂಪೆಟಿಷನ್ ನಲ್ಲಿ ಭಾಗವಹಿಸಿ, ಕರ್ನಾಟಕ ಹಾಗೂ ಗೋವಾ ದ ಇಂಟರ್ ಗ್ರೂಪ್ ಲೆವೆಲ್ ನಲ್ಲಿ, ಒಟ್ಟಾರೆ ಡ್ರಿಲ್ ಕಾಂಪೆಟಿಷನ್ ನಲ್ಲಿ ಮೊದಲನೆಯ ಸ್ಥಾನವನ್ನು ಗಳಿಸಿದರು.
  6. 19 ಎಸ್. ಡಿ ಹಾಗೂ 10 ಎಸ್. ಡಬಲ್ಯೂ ಗಳು ಕಂಬೈನ್ಡ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ - 2 ಯೆಲಹಂಕಾ ದಲ್ಲಿ ಭಾಗವಹಿಸಿ, ಡ್ರಿಲ್ಲ್ ಕಾಂಪೆಟಿಷನ್ ನಲ್ಲಿಯೂ, ಕ್ರೀಡಾ ಸ್ಫರ್ಧೆಯಲ್ಲಿಯೂ ಎರಡನೆಯ ಸ್ಥಾನವನ್ನು ಗಳಿಸಿದರು.
  7. 6 ಎಸ್.ಡಿ ಗಳೂ, ಒಬ್ಬ ಎಸ್. ಡಬಲ್ಯೂ ವೂ ತುಮಕೂರಿನಲ್ಲಿ ನಡೆದ ಐ.ಜಿ.ಸಿ. / ಟಿ.ಎಸ್.ಸಿ. - 1 ನಲ್ಲಿ ಭಾಗವಹಿಸಿದರು.
  8. ಕೆಡೆಟ್ ಗಳು ಎನ್.ಸಿ.ಸಿ ಯವರು ನಡೆಸಿದ ಸ್ವಚ್ಛ ಅಭಿಯಾನ್ ಕಾರ್ಯಕ್ರಮದಲ್ಲಿ 7 ದಿವಸಗಳು ಭಾಗವಹಿಸಿದರು.
  9. ಎನ್.ಸಿ.ಸಿ. ಯವರು ನಡೆಸಿದ ಯೋಗಾ ಡೇ ಯಲ್ಲಿ ಎಲ್ಲ ಕೆಡೆಟ್ ಗಳೂ ಭಾಗವಹಿಸಿದರು.
  10. 20 ಎಸ್.ಡಿ. ಗಳೂ, 10 ಎಸ್. ಡಬಲ್ಯೂ ಗಳೂ ಬನ್ನೇರುಘಟ್ಟಾ ನ್ಯಾಷನಲ್ ಪಾರ್ಕ್ ನಲ್ಲಿ ನಡೆದ ಸಾಮಾಜಿಕ ಜಾಗೃತಿ ಕಾರ್ಯಕ್ರಮದಲ್ಲಿ ಪಾಲುಗೊಂಡರು.
  11. ಸ್ವಾತಂತ್ರ್ಯ ದಿನ ಹಾಗೂ U್ಪಣರಾಜ್ಯೋತ್ಸವ ದಿನಗಳನ್ನು ಆಚರಿಸಲಾಯಿತು.

ಜೈ ಹಿಂದ್
ಸಿ / ಟಿ ಅಂಜನಾಮೂರ್ತಿ ಕೆ.ಪಿ.
ಎನ್.ಸಿ.ಸಿ. ಕೇರ್ ಟೇಕರ್ 2/1 ಕೆ.ಎ.ಆರ್.  ಎಸ್.ಐ.ಜಿ. ಆರ್.ಇ.ಜಿ.ಟಿ. ಎನ್.ಸಿ.ಸಿ.