ಪ್ರಿನ್ಸಿಪಾಲ್ ಡೆಸ್ಕ್

ಸ್ಫರ್ಧಾತ್ಮಕ ಕ್ಷೇತ್ರದಲ್ಲಿ ಆನ್ ಲೈನ್ ಡಿಜಿಟೈಸೇಷನ್ ಅನ್ನು ಅಳವಡಿಸಿಕೊಂಡು ಮುಂದುವರೆಯುತ್ತಿರುವ ಎಮ್.ಇ.ಐ. ಪಾಲಿಟೆಕ್ನಿಕ್ ನ ಒಂದು ಭಾಗವಾಗಿರುವುದು ಅತ್ಯಂತ ಸಂತೋಷದ ಹಾಗೂ ಹೆಮ್ಮೆಯ ವಿಚಾರ. ಈ ಸ್ಫರ್ಧಾತ್ಮಕ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳಿಗೆ ಸೂಕ್ತ ವಿದ್ಯಾದಾನ ಮಾಡುವುದು ಅತಿ ಪ್ರಾಮುಖ್ಯತೆಯ ವಿಷಯ. ಇದರಿಂದ ಅವರು ತಮ್ಮ ಭವಿಷ್ಯವನ್ನು ಸೂಕ್ತವಾಗಿ ರೂಪಿಸಿಕೊಂಡು, ರಾಷ್ಟ್ರದ ಒಳ್ಳೆಯ ನಾಗರೀಕರಾಗಿ ಬಾಳಲು ಅವಕಾಶ ಕಲ್ಪಿಸಿಕೊಟ್ಟಂತಾಗುವುದರಲ್ಲಿ ಸಂದೇಹವೇ ಇಲ್ಲ.

ಎಮ್.ಇ.ಐ. ಪಾಲಿಟೆಕ್ನಿಕ್ ನ ಸಿಬ್ಬಂದಿ ಹಾಗೂ ನಿರ್ವಹಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಟ್ಟದ ಶೈಕ್ಷಣಿಕ ಹಾಗೂ ಶಿP್ಪ್ಷಣೇತರ ಕ್ಷೇತ್ರದಲ್ಲಿ ವಿದ್ಯಾಭ್ಯಾಸವನ್ನು ಕೊಡುತ್ತಿದ್ದಾರೆ ಹಾಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುವ ಸಾಮರ್ಥ್ಯವನ್ನು ಒದಗಿಸಿಕೊಡುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಎಮ್.ಇ.ಐ. ನ ವೆಬ್ ಸೈಟ್ ಕೂಡಾ ವಿದ್ಯಾರ್ಥಿಗಳ ಹಾಗೂ ಬೋಧನಾ ಸಿಬ್ಬಂದಿಯವರ ಈ ಎಲ್ಲಾ ಅದ್ಭುತ ಸಾಧನೆಗಳನ್ನೂ ಪ್ರಸ್ತುತ ಪಡಿಸುವುದರಲ್ಲಿ ಯಶಸ್ವಿಯಾಗಿದ್ದು, ಶಿಸ್ತಿನೊಡಗೂಡಿದ ಹೆಚ್ಚಿನ ಗುಣಮಟ್ಟದ ವಿದ್ಯಾಭ್ಯಾಸವನ್ನು ಪ್ರದಾನ ಮಾಡುವುದರಲ್ಲಿ ಹೆಜ್ಜೆಗೂಡಿಸಿದೆ.

ನಮ್ಮ ಸಂಸ್ಥೆಯ ಎಲ್ಲಾ ಬೋಧನಾ ಸಿಬ್ಬಂದಿಯವರಿಗೂ ಇತರ ಸಿಬ್ಬಂದಿಯವರಿಗೂ ವಿದ್ಯಾರ್ಥಿಗಳಿಗೂ, ಪಾಲಿಟೆಕ್ನಿಕ್‍ನ ವೆಬ್ ಸೈಟ್ ಅನ್ನು ಯಶಸ್ವಿಯಾಗಿ ಆರಂಭ ಮಾಡಿ ನಡೆಸುತ್ತಿರುವುದಕ್ಕಾಗಿ, ಅವರೆಲ್ಲರ ಸಾಧನೆಯನ್ನು ಈ ಮೂಲಕ ದಾಖಲಿಸಲು ಸಂತೋಷ ಪಡುತ್ತೇನೆ. ಶ್ರೀಮತಿ ಉಷಾ ರಾಣಿ (ಸಿ.ಎಸ್. ವಿಭಾಗದ ಸೆಲೆಕ್ಷನ್ ಗ್ರೇಡ್ ಲೆಕ್ಚರರ್) ಮತ್ತು ಅವರ ಬಳಗದವರನ್ನು ಈ ವೆಬ್ ಅಪ್ಲಿಕೇಷನ್‍ಅನ್ನು ಸರಿಯಾದ ಸಮಯದಲ್ಲಿ ಪೂರ್ತಿ ಮಾಡಿದುದಕ್ಕಾಗಿ ಹಾಗೂ ನಮ್ಮ ಪಾಲಿಟೆಕ್ನಿಕ್ ಆನ್ ಲೈನ್ ಆಗಿ ಹೋಗಲು ಸಹಕರಿಸಿದುದಕ್ಕಾಗಿ ವಿಶೇಷವಾಗಿ ಅಭಿನಂದಿಸಲು ಇಚ್ಛಿಸುತ್ತೇನೆ.

ಸಿ ಚಂದ್ರಶೇಖರ
ಬಿ.ಇ (ಸಿವಿಲ್) ಎಂ.ಇ (ಸಿ.ಟಿ) ಎಂ.ಐ.ಎಸ್.ಟಿ.ಇ