ಈವನಿಂಗ್ ಪಾಲಿಟೆಕ್ನಿಕ್ ವರದಿ 2017-18
ಈ ವರ್ಷ 2017 - 18 ನಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ನಿಯೋಜಿಸಲಾಯಿತು
1) ಮೆಕ್ಯಾನಿಕಲ್ ಇಂಜನಿಯರಿಂಗ್ ನ ಅಂತಿಮ ವರ್ಷದ ವಿದ್ಯಾರ್ಥಿಗಳು, ಸೆಪ್ಟೆಂಬರ್ ತಿಂಗಳಿನಲ್ಲಿ ಉಡುಪಿಯ ಬಳಿಯಿರುವ ಹೊಸಂಗಡಿ ಯಲ್ಲಿರುವ ಅಂಡರ್ ಗ್ರೌಂಡ್ ವಾರಾಹಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ್ ಫಾಲ್ಸ್ ನಲ್ಲಿರುವ ಮಹಾತ್ಮಾ ಗಾಂಧೀ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್‍ಗಳನ್ನು ಸಂದರ್ಶಿಸಿದರು. ಇದಕ್ಕೆ ಮಾರ್ಗದರ್ಶಕರಾಗಿ ಶ್ರೀ ಕುಮಾರ್, ಎಸ್.ಜಿ.ಐ. / ಎಮ್.ಇ. ಮತ್ತು ಹೆಚ್ ಹ್ಮಚ್ಚೀರಪ್ಪ ನವರು ಹಾಗೂ ಪೆÇೀಷಕ ಸಿಬ್ಬಂದಿ ಶ್ರೀ ಶಶಿಕಾಂತ್ ರವರು ಸಹಾಯಕ್ಕಿದ್ದರು.
2) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ, ಉಡುಪಿಯ ಬಳಿಯಿರುವ ಹೊಸಂಗಡಿ ಯಲ್ಲಿರುವ ಅಂಡರ್ ಗ್ರೌಂಡ್ ವಾರಾಹಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್, ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಟೀ ಪೌಡರ್ ಮ್ಯಾನುಫಾಕ್ಚರಿಂಗ್ ಫ್ಯಾಕ್ಟರಿ - ಇವುಗಳನ್ನು ಶ್ರೀ. ನಾಗರಾಜ್. ಎಸ್. ಎಸ್.ಜಿ.ಎಲ್. / ಇ.ಇ. ಹಾಗೂ ಸಹಾಯಕ ಸಿಬ್ಬಂದಿ ಶ್ರೀ ಹರಿಪ್ರಸಾದ್ ರವರ ಮಾರ್ಗದರ್ಶನದಲ್ಲಿ ಭೇಟಿಯನ್ನು ಆಯೋಜಿಸಲಾಯಿತು.
3) ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿಸಲಾದ, ಧ್ರೀ ಶ್ರೀಮಂತ್ ಹೆಚ್. ಎಸ್.ಜಿ.ಎಲ್. / ಇ.ಇ.ರವರ ಮಾರ್ಗದ್ರ್ಶನದಲ್ಲಿ ನಡೆಸಿದ ಪೋರ್ಟೆಬಲ್ ಪೋಡಿಯಂ ಪಬ್ಲಿಕ್ ಅಡ್ರೆಸ್ಸಿಂಗ್ ಸಿಸ್ಟಮ್ ವಿತ್ ಬಿಲ್ಟ್-ಇನ್ ಯೂ.ಪಿ.ಎಸ್. - ಈ ಶೈಕ್ಷಣಿಕ ಯೋಜನೆ ಯ ಉತ್ಪಾದನೆಯನ್ನು ಶಾಲಾ ತರಗತಿಯಲ್ಲಿಯೂ, ತೆರೆದ ಸಭಾಂಗಣದಲ್ಲಿಯೂ ಉಪಯೋಗಿಸಬಹುದು
4) ಎಲೆಕ್ಟ್ರಿಕಲ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳೂ ಶ್ರೀ. ಎಸ್. ನಾಗರಾಜ್ ಎಸ್.ಜಿ.ಎಲ್. / ಇ.ಇ. ರವರ ಮಾರ್ಗದರ್ಶನದಲ್ಲಿ, ಸ್ವಯಂ ಪ್ರೇರಣೆಯಲ್ಲಿ ಕ್ಯಾಂಪಸ್ ನ ಎಲ್ಲಾ ಲ್ಶೆಟಿಂಗ್ ಸಿಸ್ಟಮ್ ಅನ್ನೂ ದುರಸ್ತಿ ಮಾಡಿ, ಸರ್ವೀಸಿಂಗ್ ಮಾಡುವುದರಲ್ಲಿ ಯಶಸ್ವಿಯಾದರು.
5) ಮುಖ್ಯ ಕಟ್ಟಡದ ನೆಲ ಮಾಳಿಗೆಯ ಶಾರದಾ ಹಾಲ್ ನಲ್ಲಿರುವ, ಹಾಗೂ ಸೈನ್ಸ್ ಲ್ಯಾಬ್ ನ ಎದುರಿನಲ್ಲಿರುವ ಯೂನಿಟ್ - 1, ಯೂನಿಟ್ - 2 ಮತ್ತು ಯೂನಿಟ್ - 3 ರಲ್ಲಿ, ರೀ-ಕಂಡಿಷನಿಂಗ್ ಆಫ್ ಪ್ಯೂರಿಫೈಡ್ ಡ್ರಿಂಕಿಂಗ್ ವಾಟರ್ ಸಿಸ್ಟಮ್ ಅನ್ನು ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಶ್ರೀ. ಕುಮಾರ್, ಎಸ್.ಜಿ.ಎಲ್., / ಎಮ್.ಇ. ಮತ್ತು ಹ್ಮಚ್ಚೀರಪ್ಪ ಹೆಚ್. ಎಸ್.ಜಿ.ಎಲ್. / ಎಮ್.ಇ. ಇವರ ಮಾರ್ಗದರ್ಶನದಲ್ಲಿ ಮಾಡಿದರು. ಎಲ್ಲಾ ವಿದ್ಯಾರ್ಥಿಗಳೂ ಈ ಕೆಲಸವನ್ನು ಯಶಸ್ವಿಯಾಗಿ ಮಾಡಲು ಯೋಗದಾನ ಮಾಡಿದರು.
6) ಪಿ.ಎಲ್.ಸಿ.ಆಪರೇಟೆಡ್ ಬೆಲ್ಟ್ ಕನ್ವೇಯರ್ ಸಿಸ್ಟಮ್ ಕಿಟ್ ನ ಅಭಿವೃದ್ಧಿ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿUಳು ಶ್ರೀ. ಕುಮಾರ್, ಎಸ್.ಜಿ.ಎಲ್. / ಎಮ್.ಇ. ಹಾಗೂ ಶ್ರೀ. ಹ್ಮಚ್ಚೀರಪ್ಪ, ಹೆಚ್. ಎಸ್.ಜಿ.ಎಲ್. / ಎಮ್.ಇ. ಇವರ ನೇತೃತ್ವದಲ್ಲಿ ಮಾಡಿದÀ ಶೈಕ್ಷಣಿಕ ಯೋಜನೆಯ ಕೆಲಸ ಯಶಸ್ವಿಯಾಗಿ ನೆರವೇರಿತು. ಈ ಕೆಲಸವನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಲು ಎಲ್ಲಾ ವಿದ್ಯಾರ್ಥಿಗಳೂ ಯೋಗದಾನ ಮಾಡಿದರು.ಇದನ್ನು ಪಿ.ಎಲ್.ಸಿ. ಯಲ್ಲಿ ಡೆಮೋ ಕಿಟ್ ಅನ್ನಾಗಿ ಉಪಯೋಗಿಸಲಾಯಿತು.
7) ಪಾಲಿಟೆಕ್ನಿಕ್ ಕ್ಯಾಂಪಸ್ ನಲ್ಲಿ ಆಯುಧ ಪೂಜೆಯ ಕೊಂಡಾಟವನ್ನು ಸಂಜೆ ಪಾಲಿಟೆಕ್ನಿಕ್ ನ ಎಲ್ಲಾ ವಿದ್ಯಾರ್ಥಿಗಳೂ ಸಾಂಸ್ಕೃತಿಕ ಮಟ್ಟಾದಲ್ಲಿ ಆಚರಿಸಿದರು.
8) ವಾರ್ಷಿಕ ಕ್ರೀಡಾ ದಿನದ ಸಮಾರಂಭದಲ್ಲಿ, ಸಂಜೆ ಪಾಲಿಟೆಕ್ನಿಕ್ ನ ಎಲ್ಲಾ ವಿದ್ಯಾರ್ಥಿಗಳೂ ಸಕ್ರಿಯವಾಗಿ ಭಾಗವಹಿಸಿದರು.
ಶ್ರೀ. ಹೆಚ್. ಹ್ಮಚ್ಚೀರಪ್ಪ
ತಾಂತ್ರಿಕ ಆಫೀಸರ್